ಕರಾವಳಿಮೂಡಬಿದ್ರಿ

ಭಜರಂಗದಳ ಸಂಚಾಲಕನಿಂದ ವಿವಾಹಿತ ಮಹಿಳೆ ಅಪಹರಣ; ದೂರು ದಾಖಲು

ಕಾರ್ಕಳ: ಭಜರಂಗದಳ ಮುಖಂಡನೊಬ್ಬ ವಿವಾಹಿತ ಮಹಿಳೆಯನ್ನು ಅಪಹರಣ ಮಾಡಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.

ಭಜರಂಗದಳದ ಬಜಗೋಳಿ ವಲಯ ಸಹ ಸಂಚಾಲಕನಾಗಿರುವ ಸಂದೀಪ್ ಆಚಾರ್ಯ ಎಂಬಾತ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿಯ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿದ್ದು, ಈಕೆಗೆ 2 ವರ್ಷದ ಮಗುವಿದೆ. ಘಟನೆ ಕುರಿತು ಅಪಹರಣಕ್ಕೊಳಗಾಗಿರುವ ಮಹಿಳೆಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದಾ ಹೆಣ್ಣುಮಕ್ಕಳ, ಮಹಿಳೆಯರ ರಕ್ಷಣೆಯ ಬಗ್ಗೆ ಮತ್ತು ಲವ್ ಜಿಹಾದ್ ಎಂದು ಗುಲ್ಲೆಬ್ಬಿಸುವ ಸಂಘಟನೆಯ ಮುಖಂಡನೇ ಇಂತಹ ನೀಚ ಕೃತ್ಯ ಎಸಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ‌.

Related Articles

Back to top button