ಕರಾವಳಿಮಂಗಳೂರು

ಮಂಗಳೂರು: ವಾಹನ ಸಂಚಾರ ಮಾರ್ಗದಲ್ಲಿ ಡಿ.23ರವರೆಗೆ ತಾತ್ಕಾಲಿಕ ಬದಲಾವಣೆ

ಮಂಗಳೂರು: ನಗರದ ಶರವು ಮಹಾಗಣಪತಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಪ್ರಯುಕ್ತ ಮುಂಬರುವ ಡಿ.23ರವರೆಗೆ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಶರವು ವಿಮಲೇಶ್ ಜಂಕ್ಷನ್‌ನಿಂದ ಕೆಎಸ್‌ಆರ್ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಎಲ್ಲ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆಎಸ್‌ಆರ್ ರಸ್ತೆಯಿಂದ ಪಿ.ಎಂ.ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ನೇರವಾಗಿ ಹಂಪನಕಟ್ಟೆ ಜಂಕ್ಷನ್ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಕೆ.ಬಿ.ಕಟ್ಟೆ ಜಂಕ್ಷನ್- ಗಣಪತಿ ಹೈಸ್ಕೂಲ್ ರಸ್ತೆ- ಶರವು ದೇವಸ್ಥಾನ ರಸ್ತೆಯ ಮೂಲಕ ಕೆಎಸ್‌ಆರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪಿ.ಎಂ.ರಾವ್ ರಸ್ತೆಯ ಮೂಲಕ ಕೆಎಸ್‌ಆರ್ ರಸ್ತೆ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Back to top button