ಕರಾವಳಿವಿಟ್ಲ

ವಿಟ್ಲದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ “ಕಿಚನ್ ಹಬ್”

ವಿಟ್ಲ : ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ನೂತನವಾಗಿ “ಕಿಚನ್ ಹಬ್” ಶುಭಾರಂಭಗೊಂಡಿತು. ಸಯ್ಯಿದ್ ಅಲಿ ತಂಙಳ್ ಕುಂಬೋಳ್, ಮತ್ತು ಸೈಯದ್ ಅನಸ್ ತಂಙಳ್ ಅವರ ನೇತೃತ್ವದಲ್ಲಿ ಜಂಟಿಯಾಗಿ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಶಾಸಕ ಯು.ಟಿ ಖಾದರ್ ಆಗಮಿಸಿ, ಶುಭ ಹಾರೈಸಿದರು.‌ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಎಸ್ ಡಿ ಪಿ ಐ ಮುಖಂಡ ರಿಯಾಝ್ ಫರಂಗಿಪೇಟೆ, ವಾಣಿಜ್ಯ ಸಂಘದ ಅಧ್ಯಕ್ಷ ಬಾಬು ಕೆ.ವಿ, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ರವಿಪ್ರಕಾಶ್, ಆರ್.ಕೆ‌.ಅಬ್ದುಲ್ಲ ಹಾಜಿ ಸ್ಟೈಲ್ ಪಾರ್ಕ್, ವಿ.ಎಚ್.ಅಶ್ರಫ್, ಇಬ್ರಾಹಿಂ ಹಳೆಮನೆ, ಸಿದ್ದೀಕ್ ವಿಟ್ಲ ಬಝಾರ್, ರಶೀದ್ ನೆಲ್ಯಾಡಿ, ಅಬ್ದುಲ್ ರಝಾಕ್ ಗಂಡಿಬಾಗಿಲು, ರಮಾನಾಥ ವಿಟ್ಲ, ಮಹಮ್ಮದ್ ಟಿ.ಕೆ, ಸೌಕತ್ ಅಲಿ ಫೈಝಿ ಗಂಡಿಬಾಗಿಲು, ಉಬೈದ್ ವಿಟ್ಲ ಬಝಾರ್, ಅನ್ಸಾರ್ ವಿಟ್ಲ ಬೇಕ್, ಉದೈಫ್ ಮೆನ್ಸ್ ಸಿಟಿ, ರಕ್ಷಿತ್ ಆರ್.ಎಸ್, ಶಾರುಖ್ ಮೆಲ್ಕಾರ್, ಶಾಕೀರ್ ಕನ್ಯಾನ, ಖಾಸಿಂ ಸಂಪ್ಯ, ಮನ್ಸೂರು ಬೆಳ್ತಂಗಡಿ, ಮೊದಲಾದವರು ಉಪಸ್ಥಿತರಿದ್ದರು. ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಅಬೂಬಕರ್ ಅನಿಲಕಟ್ಟೆ ವಂದಿಸಿದರು. ಶಾಕಿರ್ ಅಳಕೆ ಮಜಲು ನಿರೂಪಿಸಿದರು.

ಮಳಿಗೆಗೆ ಭೇಟಿ ಕೊಟ್ಟು ಪ್ರತಿಗಂಟೆಗೊಮ್ಮೆ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುತ್ತಿದೆ. ಪ್ರತಿ 500 ಖರೀದಿಯ ಮೇಲೆ ಬಂಪರ್ ಬಹುಮಾನ ಕೂಪನ್ ನೀಡಲಾಗುತ್ತದೆ. ಅಕ್ಟೋಬರ್ 30 ರಂದು ಡ್ರಾ ಫಲಿತಾಂಶ ನಡೆಯಲಿದೆ. ಪ್ರಥಮ ಬಹುಮಾನ 5000 ರೂ. ಖರೀದಿಯ ಕೂಪನ್, ದ್ವಿತೀಯ 3000 ರೂ. ಸಾವಿರ ಖರೀದಿಯ ಕೂಪನ್ ಹಾಗೂ 10 ಆಕರ್ಷಕ ಬಹುಮಾನ ಆಯೋಜಿಸಲಾಗಿತ್ತು.

Related Articles

Back to top button