ಅಂತಾರಾಷ್ಟ್ರೀಯ

ಸ್ವಾಲಿಹಾ ಮಹಿಳಾ ತರಗತಿ (KCF INC) ಅಂತರ್ರಾಷ್ಟ್ರೀಯ ಮಟ್ಟದ ಉದ್ಘಾಟನೆ

ದೋಹ,ಜ 13 : ಕರ್ನಾಟಕ ಕಲ್ಚರಲ್ ಫೌಂಡೇಶನ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಇಲ್ಲಿನ IICC ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಸ್ವಾಲಿಹಾ ಮಹಿಳಾ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಐ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಡಾ.ಬಶೀರ್ ಪುತ್ತುಪ್ಪಾಡಂ ಉದ್ಘಾಟಿಸುತ್ತಾ, ಪ್ರಸಕ್ತ ಸನ್ನಿವೇಶಗಳು ಸಮಸ್ಯೆಯ ಸುಳಿಯಲ್ಲಿದ್ದು,ದಾರಿ ತಪ್ಪಲಿರುವ ನೂರೊಂದು ಮಾರ್ಗಗಳಿದೆ. ಕುಟುಂಬವನ್ನು ಸರಿದಾರಿಗೆ ತರಲು ಸಾಧ್ಯವಿರುವವರು ಗೃಹಿಣಿ ಅಥವಾ ತಾಯಂದಿರಾಗಿದ್ದಾರೆ.ಹೆಣ್ಣಿನಿಂದ ಕುಟುಂಬ ಸಬಲೀಕರಣ ಸಾಧ್ಯವೆಂದು ಅಭಿಪ್ರಾಯಪಟ್ಚರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಮಲಪ್ಪುರಂ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಅಂತರ್ರಾಷ್ಟ್ರೀಯ ಮಟ್ಚದ ಸ್ವಾಲಿಹಾ ಮಹಿಳಾ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಇಸ್ಲಾಂ ನೀಡಿದ ಸ್ಥಾನಮಾನಗಳು ಅಭೂತಪೂರ್ವವಾಗಿದ್ದು ಅದನ್ನು ಅರ್ಥೈಸುವಲ್ಲಿ ಕೆಲವರು ಎಡವುತ್ತಿದ್ದಾರೆ.ಹೆಣ್ಣೆಂದರೆ ಹೆಂಡತಿ ಮಾತ್ರವಲ್ಲ,ಅವಳೊಂದು ಸಹೋದರಿ,ಮಾತೆ,ಗೃಹಿಣಿ ಎಂಬುವುದನ್ನು ಮನವರಿಕೆ ಮಾಡಬೇಕಾಗಿದೆ ಎಂದರಲ್ಲದೆ ಹೆಣ್ಣಿಗೆ ಧಾರ್ಮಿಕ ತರಗತಿ ನೀಡುವುದರ ಪ್ರಾಮುಖ್ಯತೆ ಹಾಗೂ ಅದರ ಪ್ರಯೋಜನಗಳ ಬಗ್ಗೆ ಕುರ್ ಆನ್ ಹಾಗೂ ಹದೀಸ್ ವ್ಯಾಖ್ಯಾನ ದೊಂದಿಗೆ ಸವಿಸ್ತಾರವಾಗಿ ವಿವರಿಸಿದರು.

ಸ್ವಾಲಿಹ ಕೋರ್ಸ್ ನ ಕತೃ G.M ಕಾಮಿಲ್ ಸಖಾಫಿ , K.C.F ಅಂತರ್ರಾಷ್ಟ್ರೀಯ ಸಮಿತಿಅಧ್ಯಕ್ಷರಾದ D.P ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ, P.M.H ಅಬ್ದುಲ್ ಹಮೀದ್ ಈಶ್ವರಮಂಗಲ, ಅಲಿ ಮುಸ್ಲಿಯಾರ್ ಬಹರೈನ್ ಹಾಗೂ ವಿವಿಧ ರಾಷ್ಟ್ರಗಳ K.C.F ನೇತಾರರು ಆನ್ಲೈನ್ ಉಪಸ್ಥಿತಿಯಲ್ಲಿದ್ದರು. ಇದೇ ಸಂದರ್ಭ KCF ಖತ್ತರ್ ರಾಷ್ಟ್ರೀಯ ಸಮಿತಿ ಪ್ರತಿಭೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರು ಭಾಗವಹಿಸಿದ್ದರು.


ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹನೀಫ್ ಪಾತೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಹ್ ರೂಫ್ ಸುಲ್ತಾನಿ ನಿರೂಪಿಸಿದರು.ಶಿಕ್ಷಣ ವಿಭಾಗ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿ, ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ವಂದಿಸಿದರು.

Related Articles

Back to top button