ಕರ್ನಾಟಕ

ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಬಂದೂಕು ಲೈಸೆನ್ಸ್ ನೀಡಲಿ:ಸಚಿವ ಆನಂದ ಸಿಂಗ್ ಅಭಿಪ್ರಾಯ

ವಿಜಯನಗರ: ಮೈಸೂರಿನ ಗ್ಯಾಂಗ್​ರೇಪ್ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವುದು ಶತಃಸಿದ್ದ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಸಾಮಾಜಿಕ‌ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

ಹೆಣ್ಣು ಮಗಳು ಇಂತಹ ನೀಚ ಕೃತ್ಯಗಳಿಂದ ಹಾಗೂ ಸ್ವಾವಲಂಬಿಯಾಗಿ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳಲು ಸರ್ಕಾರದಿಂದ ಮಹಿಳೆಯರಿಗೆ ಬಂದೂಕು ಪರವಾನಗಿ ನೀಡಿದರೆ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆನಂದ್​ ಸಿಂಗ್​, ತಪ್ಪಿತಸ್ಥರಿಗೆ ದುಬೈ ಮಾದರಿ ಉಗ್ರ ಶಿಕ್ಷೆಯಾಗಬೇಕು ಎಂದಿದ್ದಾರೆ. ಚಾಮುಂಡಿ ಬೆಟ್ಟದಂತಹ ಪ್ರಸಿದ್ಧ ಪ್ರವಾಸೀ ತಾಣದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಪ್ರವಾಸೋದ್ಯಮ ತಾಣಗಳಲ್ಲಿ ಸೇಫ್ಟಿ ಇಲ್ಲ. ಮೂಲಭೂತ ಸೌಕರ್ಯ ನೀಡಲು ಹೋದ್ರೆ ಅದನ್ನು ಖಾಸಗೀಕರಣ ಮಾಡ್ತಿದೀರಿ ಅಂತ ವಿರೋಧ ಮಾಡ್ತಾರೆ ಎಂದರು ಸಿಂಗ್. 

Related Articles

Back to top button