ಕ್ರೀಡೆ

ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅಫ್ರಿದಿ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ

ಅಡಿಲೇಡ್​ : ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಅಡಿಲೇಡ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಹ್ಯಾರಿಸ್ ರೌಫ್ ಅವರ ಅದ್ಭುತ ಬೌಲಿಂಗ್ ಮತ್ತು ಸ್ಯಾಮ್ ಅಯ್ಯೂಬ್ ಅವರ ಸ್ಫೋಟಕ ಬ್ಯಾಟಿಂಗ್ ಪಾಕಿಸ್ತಾನದ ಗೆಲುವಿಗೆ ಕಾರಣವಾಯಿತು.

ಆಸ್ಟ್ರೇಲಿಯಾ 163 ರನ್‌ಗಳಿಗೆ ಆಲೌಟ್ ಆಗಿತು, ಪಾಕಿಸ್ತಾನ ಸುಲಭವಾಗಿ ಗೆಲುವು ಸಾಧಿಸಿತು. ಇದು ಅಡಿಲೇಡ್​ನಲ್ಲಿ 28 ವರ್ಷಗಳ ನಂತರ ಪಾಕಿಸ್ತಾನದ ಗೆಲುವಾಗಿದೆ.
ಅಡಿಲೇಡ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ ಪಾಕಿಸ್ತಾನ ತಂಡ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಮೆಲ್ಬೋರ್ನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದ್ದ ಪಾಕಿಸ್ತಾನ ತಂಡ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾವನ್ನು ಏಕಪಕ್ಷೀಯವಾಗಿ ಮಣಿಸಿ, ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಅಡಿಲೇಡ್ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೇ ಕೇವಲ 35 ಓವರ್‌ಗಳಲ್ಲಿ 163 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 26.3 ಓವರ್‌ಗಳಲ್ಲಿ ಕೇವಲ 1 ವಿಕೆಟ್​ ಕಳೆದುಕೊಂಡು ಜಯದ ನಗೆ ಬೀರಿತು. ಈ ಮೂಲಕ ಅಡಿಲೇಡ್ ಮೈದಾನದಲ್ಲಿ 28 ವರ್ಷಗಳ ನಂತರ ಆಸ್ಟ್ರೇಲಿಯಾವನ್ನು ಸೋಲಿಸಿದ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಇದಕ್ಕೂ ಮುನ್ನ 1996ರಲ್ಲಿ ಅಡಿಲೇಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ಹ್ಯಾರಿಸ್ ರೌಫ್ ಮಾರಕ ದಾಳಿ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪಾಕ್ ವೇಗಿಗಳಾದ ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅಫ್ರಿದಿ ದಾಳಿಗೆ ತತ್ತರಿಸಿ ಹೋಯಿತು. ಈ ಇಬ್ಬರ ದಾಳಿಯ ಮುಂದೆ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆಸೀಸ್​ಗೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ತಂಡದ ಪರ ಸ್ಟೀವ್ ಸ್ಮಿತ್ ಕಲೆಹಾಕಿದ 35 ರನ್​ಗಳೇ ಅತ್ಯಧಿಕ ಸ್ಕೋರ್​ ಆಗಿತ್ತು. ಉಳಿದಂತೆ ಭಾಗಶಃ ಆಟಗಾರರ ಎರಡಂಕಿ ಮೊತ್ತ ದಾಖಲಿಸಿದರಾದರೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು. ತಂಡದ 8 ಆಟಗಾರರು 10 ಕ್ಕಿಂತ ಹೆಚ್ಚು ರನ್ ಕಲೆಹಾಕಿದರು. ಇದರಲ್ಲಿ ಸ್ಮಿತ್ ಹೊರತುಪಡಿಸಿ ಉಳಿದವರೆಲ್ಲ ಕೇವಲ 20 ರನ್​ಗಳೊಳಗೆ ಪೆವಿಲಿಯನ್ ಸೇರಿಕೊಂಡರು.

ಇತ್ತ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕವನ್ನು ಇನ್ನಿಲ್ಲದಂತೆ ಕಾಡಿದ ಹ್ಯಾರಿಸ್ ರೌಫ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಆರನ್ ಹಾರ್ಡಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಬೇಟೆಯಾಡಿದರು. ಈ ಮೂಲಕ ಹ್ಯಾರಿಸ್ ರೌಫ್ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅತ್ಯುತ್ತಮ ಏಕದಿನ ಪ್ರದರ್ಶನವನ್ನು ನೀಡಿದಲ್ಲದೆ ಅಡಿಲೇಡ್ ಮೈದಾನದಲ್ಲಿ ಪಾಕಿಸ್ತಾನಿ ವೇಗದ ಬೌಲರ್‌ ಒಬ್ಬ ನೀಡಿದ ಅತ್ಯುತ್ತಮ ಪ್ರದರ್ಶನ ಎಂಬ ದಾಖಲೆಯನ್ನು ನಿರ್ಮಿಸಿದರು.

Back to top button