ಕರಾವಳಿವಿಟ್ಲ

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ SDPI ವಿಟ್ಲ ವಲಯ ಸಮಿತಿಯಿಂದ ಪ್ರತಿಭಟನೆ

ವಿಟ್ಲ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡುಗೆ ಅನಿಲ ದರ ಏರಿಕೆ ಖಂಡಿಸಿ ಎಸ್ ಡಿ ಪಿ ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲದ ಸಂತೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ ಡಿ ಪಿ ಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ಮಹಮೋದ್ ಕಡಂಬು ,ಬಂಟ್ವಾಳ ಕ್ಷೆತ್ರ ಸಮಿತಿಯ ಪ್ರದಾನ ಕಾರ್ಯದರ್ಶಿಯಾದ ಕಲಂದರ್ ಪರ್ತಿಪ್ಪಾಡಿ ಮತ್ತು ಪುತ್ತೂರು ಕ್ಷೆತ್ರ ಸಮಿತಿ ಸದಸ್ಯರಾದ ಶಾಕಿರ್ ಅಳಕೆಮಜಲ್ ಮಾತನಾಡಿದರು.‌ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೋವಿಡ್ ಸಂಕಷ್ಟದ ಸಮಯದಲ್ಲಿ ಅಡುಗೆ ಅನಿಲ ದರ ಏರಿಕೆ ಮಾಡಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ವಲಯ ಸಮಿತಿ ಅಧ್ಯಕ್ಷರಾದ ರಹೀಮ್ ಕಂಬಳಬೆಟ್ಟು , ಎಸ್ ಡಿ ಪಿ ಐ ಬೆಂಬಲಿತ ಪಂಚಾಯತ್ ಸದಸ್ಯರಾದ ಸಿದ್ದಿಕ್ ಕಂಬಳಬೆಟ್ಟು, ವಿಟ್ಲ ಪಟ್ಟಣ ಸಮಿತಿ ಅಧ್ಯಕ್ಷ ರಫೀಕ್ ಪೊನ್ನೊಟು, ವಿಟ್ಲ ಬೂತ್ ಸಮಿತಿ ಅಧ್ಯಕ್ಷ ರಾದ ಹಸ್ಸನ್ ಕುಂಜಿ ಪೊನ್ನೊಟು ,ಒಕ್ಕೆತೂರು ಬೂತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಎನ್3, ಕೊಳಂಬೆ ಬೂತ್ ಸಮಿತಿ ಅಧ್ಯಕ್ಷ ಶಾಫಿ ಕೊಳಂಬೆ, ಸಾದಾತ್ ನಗರ ಬೂತ್ ಸಮಿತಿ ಅಧ್ಯಕ್ಷರಾದ ರಝಾಕ್ (ಮೋನು )ಕಂಬಳಬೆಟ್ಟು, ಮತ್ತು ಹಲವಾರು ಕಾರ್ಯಕ್ರತರು ಉಪಸ್ಥಿತರಿದ್ದರು. ವಿಟ್ಲ ವಲಯ ಅಧ್ಯಕ್ಷ ರಹೀಮ್ ಕಂಬಳಬೆಟ್ಟು ಸ್ವಾಗತಿಸಿದರು. ವಿಟ್ಲ ಪಟ್ಟಣ ಸಮಿತಿ ಕಾರ್ಯದರ್ಶಿ ಸರ್ ಪ್ರಾಝ್ ಮೇಗಿನಪೇಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Related Articles

Back to top button