Uncategorized

ಗದ್ದಲ ಕೋಲಾಹಲದಲ್ಲೇ ಕೊನೆಯಾದ ಅಧಿವೇಶನ: ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ಪೆಗಾಸಸ್ ವಿವಾಹ, ಕೋವಿಡ್ ನಿರ್ವಹಣೆ ಸೇರಿದಂತೆ ಮತ್ತಿತರ ವಿಷಯಗಳು ಲೋಕಸಭೆಯಲ್ಲಿ ಸತತ 23 ದಿನಗಳಿಂದಲೂ ಪ್ರತಿಧ್ವನಿಸಿ ಯಾವುದೇ ವಿಷಯಗಳ ಚರ್ಚೆ ಇಲ್ಲದೇ ಅಂತ್ಯಗೊಂಡಿದೆ. ಇಂದೂ ಕೂಡ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಕಲಾಪವನ್ನು ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಕಲಾಪ ಆರಂಭವಾಗುತ್ತಿದ್ದಂತೆಯೇ ಇಂದೂ ಕೂಡ ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಪೆಗಾಸಸ್‌, ಕೋವಿಡ್ ವಿರ್ವಹಣೆ ಹಾಗೂ ನೂತನ ಕೃಷಿ ಕಾಯ್ದೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಗದ್ದಲ ಉಂಟಾದ ಪರಿಣಾಮ ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡಿತ್ತು. ಆಗಸ್ಟ್ 13ರವರೆಗೂ ಅಧಿವೇಶನ ನಡೆಯಬೇಕಿತ್ತು.

Related Articles

Back to top button