ಮಂಗಳೂರುಗ್ರಾಮಾಂತರ; ದ.ಕ ಜಿಲ್ಲೆಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾದಂತಹ ಜಿಲ್ಲೆ, ಆದರೆ ಈ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಮೆಡಿಕಲ್ ಕಾಲೇಜುಗಳಿಲ್ಲದೆ ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವೆಂಬುದು ಕನಸು ಮಾತ್ರ ಎಂಬ ಪರಿಸ್ಥಿತಿಯಿದೆ. ಜಿಲ್ಲೆಯನ್ನು ಗಮನಿಸಿ ನೋಡಿದರೆ ವೈದ್ಯಕೀಯ ಖಾಸಗೀಕರಣ ಹೆಚ್ಚಾಗಿದ್ದು ಮಂಗಳೂರಿನ ಹೆಸರಾಂತ ಎಲ್ಲಾ ಮೆಡಿಕಲ್ ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಕಾರ್ಪೊರೇಟರ್ ವ್ಯಕ್ತಿಗಳು ಚಲಾಯಿಸುತ್ತಿದ್ದು, ಜಿಲ್ಲೆಯಲ್ಲಿ ಒಂದು ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲ ಇದರಿಂದಾಗಿ ಹಲವಾರು ವಿದ್ಯಾರ್ಥಿಗಳು ವೈದ್ಯರಾಗಬೇಕೆಂಬ ಕನಸು,ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯಬೇಕೆಂಬ ಕನಸು ಬರೇ ಕನಸಾಗಿಯೇ ಉಳಿದಿದೆ. ಈಗ ಜಿಲ್ಲೆಯಲ್ಲಿ ಇರುವಂತಹ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಗಮನಿಸಿದರೆ ನೊಂದಾವಣೆ ಪ್ರಾರಂಭವಾಗುದಕ್ಕಿಂತ ಮುಂಚಿತವಾಗಿ ಸೀಟ್‌ಗಳು ಮುಗಿದಿರುತ್ತದೆ, ಏಕೆಂದರೆ ಎಲ್ಲಾ ಸೀಟ್‌ಗಳನ್ನು ಏಜೆಂಟ್‌ಗಳು ಖರೀದಿಸಿ ಲಕ್ಷ-ಲಕ್ಷ ಹಣಕ್ಕೆ ಕಾಲೇಜು ಸೀಟು ಮಾರುತ್ತಿದ್ದಾರೆ. ಇಂದು ಶಿಕ್ಷಣ ಕ್ಷೇತ್ರವೆಂಬುವುದು ವ್ಯಾಪಾರವಾಗಿ ಮಾರ್ಪಟ್ಟಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಅವಶ್ಯಕವಾಗಿದೆ, ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜನಾಂದೋಲನಕ್ಕೆ ಕರೆ ನೀಡಿದ್ದು ಇದರ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ಜಿಲ್ಲಾ ಸಮಿತಿ ನಿಯೋಗವು ಬಂಟ್ವಾಳ ತಾಲೂಕು ತಹಶೀಲ್ದಾರ್ ರನ್ನು ಭೇಟಿ ಮಾಡಿ, ಪ್ರಸ್ತುತ ವಿಷಯದ ಬಗ್ಗೆ ಚರ್ಚಿಸಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಶರ್ಫುಧ್ಧೀನ್ ಬಜ್ಪೆ, ಮೂಡಬಿದ್ರೆ ಏರಿಯಾ ಅಧ್ಯಕ್ಷ ನಬೀಲ್ , ಕಾರ್ಯದರ್ಶಿ ರಾಯೀಫ್ ಹಂಡೇಲ್ ,ಇರ್ಷಾದ್ ಉಪಸ್ಥಿತರಿದ್ದರು.