ನಾವು ಬ್ರಿಟೀಷ್ ದಾಸ್ಯದಿಂದ ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುವ ಸಡಗರದಲ್ಲಿ ಪ್ರಸ್ತುತ ಫ್ಯಾಶಿಷ್ಟ್ ಗುಲಾಮಗಿರಿಯಲ್ಲಿ ಬದುಕುತ್ತಿದ್ಧೇವೆ ಎಂಬುದನ್ನು ಮರೆತಿದ್ಧೇವೆ.ನಿಜವಾದ ಸ್ವಾತಂತ್ರ್ಯಸಿಗಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಸಂಪೂರ್ಣವಾದ ಹಕ್ಕನ್ನು ಪಡೆದು ಹಸಿವು,ಭಯಮುಕ್ತವಾಗಿ ಬದುಕುವಂತಾಗಬೇಕು.ಈ ನಿಟ್ಟಿನಲ್ಲಿ ಯುವಜನತೆ ಫ್ಯಾಶಿಷ್ಟರ ವಿರುದ್ಧ ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾಬೇಕು.ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ವಹಿಸಿ ವೀರ ಮರಣವಪ್ಪಿದ ಸಹಸ್ರಾರು ದಲಿತ ಮತ್ತು ಮುಸ್ಲಿಮರಿದ್ಧಾರೆ.ಆದರೆ ಇಂತಹ ನಾಯಕರ ಹೆಸರುಗಳನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದ್ಧು ನಮ್ಮ ಮುಂದಿನ ಪೀಳಿಗೆಗೆ ಇಂತಹವರ ತ್ಯಾಗ-ಬಲಿದಾನವನ್ನು ನೆನಪಿಸಿಕೊಡಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ ಕರೆ ನೀಡಿದರು.ಅವರು ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ಐಎಫ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಧ್ವಜಾರೋಹಣಗೈದರು.ಎಸ್ಐಎಫ್ ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ಮತ್ತು ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷರಾದ ಸುಲೈಮಾನ್ ಸ್ವಾತಂತ್ರ್ಯ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಐಎಫ್ ಗೌರವ ಸಲಹೆಗಾರರಾದ ಹಾಜಿ ಉಮ್ಮರ್ ರಾಜ್ ಕಮಲ್, ಸೂರಿಕುಮೇರ್ ಮಸೀದಿ ಅಧ್ಯಕ್ಷರಾದ ಮೂಸಾ ಕರೀಂ, ಅಹ್ಮದ್ ಮತ್ತಿತರರು ಉಪಸ್ಥಿತರಿದ್ಧರು.
ಎಸ್ಐಎಫ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಸ್ವಾಗತಿಸಿ ಪ್ರಸ್ತಾವನೆಗೈದರು.ಬಾಶಿತ್ ಬುಡೋಳಿ ಕಾರ್ಯಕ್ರಮ ನಿರ್ವಹಿಸಿ ಗಫ್ಪೂರ್ ವಂದಿಸಿದರು.