ರಾಷ್ಟ್ರೀಯ
ಬಾಲಿವುಡ್ ನಟ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನ
ಮುಂಬೈ : ಬಾಲಿವುಡ್ ನಟ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ಹೃದಯಾಘಾತದಿಂದ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟ ನಟ ಸಿದ್ಧಾರ್ಥ್ ಶುಕ್ಲಾ ಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಯ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಿದ್ಧಾರ್ಥ್ ಶುಲ್ಕಾ ಅವರು ಟಿವಿ ಮತ್ತು ಚಲನಚಿತ್ರ ನಟರಾಗಿದ್ದು, ರಿಯಾಲಿಟಿ ಶೋ ‘ಬಿಗ್ ಬಾಸ್ 13’ ರಲ್ಲಿ ಗೆಲುವು ಸಾಧಿಸಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ದೂರದರ್ಶನ ಕಾರ್ಯಕ್ರಮ ‘ಬಾಬುಲ್ ಕಾ ಆಂಗನ್ ಚೂಟೆ ನಾ’ ನಲ್ಲಿ ಪ್ರಮುಖ ಪಾತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ ಅವರು ‘ಜಾನೆ ಪೆಹ್ಚಾನೆ ಸೆ… ಯೇ ಅಜ್ನಬ್ಬಿ’, ‘ಲವ್ ಯು ಜಿಂದಗಿ’ ‘ಬಾಲಿಕಾ ವಧು’ ಧಾರವಾಹಿಗಳಲ್ಲಿ ನಟಿಸಿದ್ದರು.