ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತವಾಗಿದೆ. ಕೋರಮಂಗಲದ ಮಂಗಳ ಕಲ್ಯಾಣಮಂಟಪದ ಬಳಿ ನಡೆದ ಘಟನೆಯಲ್ಲಿ ಕರುಣಾಸಾಗರ ಹಾಗೂ ಬಿಂದು ದಂಪತಿ ಸೇರಿ 7 ಜನ ಸಾವನ್ನಪ್ಪಿದ್ದಾರೆ. ಆಡಿ ಕಾರಿನ ಏರ್ ಬ್ಯಾಗ್ ಯಾಕೆ ತರೆಯಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ಆಡಿ ಕ್ಯೂ 3 ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗುದ್ದಿದ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಬೇಕಿತ್ತು. ಆದರೆ ಈ ಅಪಘಾತದ ವೇಳೆ ಏರ್ ಬ್ಯಾಗ್ ಓಪನ್ ಆಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪ್ರತಿಕ್ರಿಯಿಸಿ, ಆಡಿ ಕಾರು ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾರು ಕೂಡ ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಓಪನ್ ಆಗದ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ನಿರ್ಲಕ್ಷ್ಯದ ಚಾಲನೆ ಘಟನೆ ಕಾರಣವಾಗಿದೆ. ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು,
ಸಾವನ್ನಪ್ಪಿರುವ ಎಲ್ಲರ ಮಾಹಿತಿ ಲಭ್ಯವಾಗಿದ್ದು. ದಂಪತಿ, ಉಳಿದಂತೆ ಒಬ್ಬರು ಹರಿಯಾಣ ಮೂಲದವರು ಹಾಗೂ ಹುಬ್ಬಳಿ ಮೂಲದವರು ಇಬ್ಬರು ಇದ್ದರು. ಅಕ್ಷಯ್ ಗೋಯಲ್ ಕೇರಳ ಮೂಲದವರು, ಉತ್ಸವ್ – ಹರ್ಯಾಣ, ರೋಹಿತ್ – ಹುಬ್ಬಳ್ಳಿ, ಕರುಣಾ ಸಾಗರ್ ಹೊಸೂರು ಮೂಲದವರು. ಇನ್ನು ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ದರು. ಈ ಘಟನೆ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.