ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಲ್‌ಎಲ್‌ಪಿಎಸ್ 1 -18 ಎಂಜಿಡಿ ಮತ್ತು 81.7 ಎಂಎಲ್‌ಡಿ ರೇಚನ ಸ್ಥಾವರದ ಜಾಕ್‌ವೆಲ್‌ನಲ್ಲಿರುವ ತುರ್ತು ಕಾಮಗಾರಿ ಇರುವ ಕಾರಣ ಮೂರು ದಿನ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅ. 28 ರಂದು ಬೆಳಗ್ಗೆ 6 ಗಂಟೆಯಿಂದ ಅ. 30ರ ಬೆಳಗ್ಗೆ 6 ರ ವರೆಗೆ ಮೂರು ದಿನಗಳ ಕಾಲ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.