ಬಂಟ್ವಾಳ : ಮಂಗಳೂರಿನಿಂದ ಪುತ್ತೂರು ಕಡೆಗೆ ಕಿರುಚಿತ್ರವೊಂದರ ಶೂಟಿಂಗ್ ನಿಮಿತ್ತ ಐದು ಜನರ ತಂಡ ಬೆಳಿಗ್ಗೆ ಮಂಗಳೂರಿನಿಂದ ಹೊರಟಿತ್ತು. ರಾಮಲ್ ಕಟ್ಟೆ ಎಂಬಲ್ಲಿ
ಇದ್ದಕ್ಕಿದ್ದಂತೆ ಸ್ವಿಫ್ಟ್ ಡಿಸೈರ್ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ದ 2 ಮರಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿತು
ತತ್ ಕ್ಷಣ ರಕ್ಷಣೆಗೆ ಧಾವಿಸಿದ ಸ್ಥಳೀಯ ಸದಸ್ಯ ಇಬ್ರಾಹಿಂ ರಿಯಾಜ್ ಮತ್ತು ಊರಿನ ಯುವಕರು ಸಾಹಸದಿಂದ ಕಾರನ್ನು ಎತ್ತಿ ಹಿಡಿದು ಸುಮಾರು ಒಂದು ಗಂಟೆಗಳ ಕಾಲ ಸತತ ಪರಿಶ್ರಮದಿಂದ ಕಾರಿನ ನಾಲ್ಕು ದಿಕ್ಕುಗಳನ್ನು ತೆರೆದು ಜೀವ ಸಹಿತವಾಗಿ ಹೊರತೆಗೆದು ಆಸ್ಪತ್ರೆಗೆ ಸೇರಿಸಿದರು.
ಮಂಗಳೂರು ನಿವಾಸಿಗಳಾದ ಆನಂದಿತ್, ಶರತ್, ಶುಸಾನ್, ಹರ್ಷ, ಶ್ರೀರಾಮ್, ಗಾಯಗೊಂಡವರು. ಕಾರಿನಲ್ಲಿದ್ದ ಐವರು ಪ್ರಯಾಣಿಕರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡರೆ ಉಳಿದ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಯುವಕರ ಸಾಹಸಕ್ಕೆ ಪ್ರಶಂಸಿಶಿದರು ನಂತರ ಸ್ಥಳಕ್ಕಾಗಮಿಸಿದ ಸ್ಥಳೀಯ ಠಾಣಾ ಸಿಬ್ಬಂಧಿಗಳು ಆಗಮಿಸಿ ಮಹಜರು ನಡೆಸಿದರು.