ಕರಾವಳಿಮಂಗಳೂರು

ರಾಜಕೀಯ ದಾಳದ ಬಲಿಪಶುವಾಗಿದೆ ದಲಿತ ಕ್ರೈಸ್ತ ಸಮುದಾಯ : ಎಸ್ಡಿಪಿಐ ಮುಖಂಡ ಆನಂದ್ ಮಿತ್ತಬೈಲ್

ಮಂಗಳೂರು, ಆ.17: ದಲಿತ ಮತ್ತು ಕ್ರೈಸ್ತ ಸಮುದಾಯವನ್ನು ದಾಳವಾಗಿ ಮಾತ್ರ ಬಳಸಿ ರಾಜಕೀಯ ಅಧಿಕಾರದಿಂದ ದೂರ ಇಡುವ ಪ್ರಯತ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಾ ಬಂದಿದೆ ದಲಿತ ಚಳುವಳಿಗಳನ್ನು ಭಿನ್ನಾಭಿಪ್ರಾಯಗಳ ಸಂಕರ‍್ಣತೆಯ ಲಾಭ ಪಡೆದ ರಾಜಕೀಯ ಪಕ್ಷಗಳು ಈ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿಯುವಂತೆ ಮಾಡಿದೆ ಈ ಕಾರಣಕ್ಕಾಗಿ ದಲಿತರು ಮತ್ತು ಕ್ರೈಸ್ತರು ಮುಸ್ಲಿಮರು ಜೊತೆಗೂಡಿ ರ‍್ಯಾಯ ರಾಜಕೀಯ ಶಕ್ತಿಯಾಗಬೇಕಾಗಿದೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ್ ಮಿತ್ತಬೈಲ್ ಹೇಳಿದರು ಅವರು ಎಸ್ಡಿಪಿಐ ದಕ ಜಿಲ್ಲಾ ಸಮಿತಿ ಆಯೋಜಿಸಿದ ಪಕ್ಷದ ದಲಿತ ಕ್ರೈಸ್ತ ಕರ‍್ಯರ‍್ತರ ಸಮ್ಮಿಲನ ಕರ‍್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಅಹಿಂದ ರ‍್ಗದ ರಾಜಕೀಯ ಸಬಲೀಕರಣ ಮತ್ತು ಅನಿವರ‍್ಯ ಎಂಬ ವಿಷಯ ಮಂಡಿಸಿದರು. ಸಭಾಧ್ಯಕ್ಷತೆಯನ್ನು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ವಹಿಸಿದರು ಎಸ್ಡಿಪಿಐ ರಾಷ್ಟ್ರೀಯ ಕರ‍್ಯರ‍್ಶಿ ಅಲ್ಫೋನ್ಸ್ ಫ್ರಾಂಕೋ ರೈತ ಮುಖಂಡ ವಿಕ್ಟರ್ ಮರ‍್ಟಿಸ್ ರವರು ದಲಿತ ಕ್ರೈಸ್ತ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದರು.ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೌಸ್ತಿನ್ ಡಿಸೋಜ, ಮಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪ್ರೇಮ ಸತೀಶ್, ಜಿಲ್ಲಾ ಸಮಿತಿ ಸದಸ್ಯರಾದ ಲ್ಯಾನ್ಸಿ ಥೊರೆಸ್ ಹಾಗೂ ಎಸ್ಡಿಟಿಯು ರಾಜ್ಯ ಕರ‍್ಯರ‍್ಶಿ ಶೆರೀಫ್ ಪಾಂಡೇಶ್ವರ್, ಎಸ್ಡಿಟಿಯು ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ ಮತ್ತು ಎಸ್ಡಿಪಿಐ ಬೆಂಬಲಿತ ದಲಿತ ಕ್ರೈಸ್ತ ಪಂಚಾಯತ್ ಸದಸ್ಯರು ಈ ಸಂರ‍್ಭದಲ್ಲಿ ಉಪಸ್ಥಿತರಿದ್ದರು

ಜಿಲ್ಲಾ ಕರ‍್ಯರ‍್ಶಿ ಅನ್ವರ್ ಸಾದಾತ್ ಬಜತ್ತೂರು ಸ್ವಾಗತಿಸಿ ಜಮಾಲ್ ಜೋಕಟ್ಟೆ ನಿರೂಪಿಸಿದರು ಅಶ್ರಫ್ ಮಂಚಿ ದನ್ಯವಾದಗೈದರು.

Related Articles

Back to top button