ವಿಜೃಂಭಿಸಿದ ದಾರುನ್ನೂರು ಯುಎಇ ಮೆಹಫಿಲ್ ಇ ಮೀಲಾದ್ ಕಾರ್ಯಕ್ರಮ
ಯುಎಇ : ದಾರುನ್ನೂರು ಮೆಹಫಿಲ್ – ಇ -ಮೀಲಾದ್ ಕಾರ್ಯಕ್ರಮವು ಅಬ್ಜದ್ ಗ್ರಾಂಡ್ ಹೋಟೆಲ್ ಸಭಾಂಘನದಲ್ಲಿ ನಡೆಯಿತು ಸಂಶುದ್ದೀನ್ ಸೂರಲ್ಪಾಡಿ ಅವರ ಅಧ್ಯಕ್ಸತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಬಹುಮಾನ್ಯ ಮುಹಮ್ಮದ್ ಮಾಡವು ರವರು ದುಆ ನೆರವೇರಿಸಿದರು . ದಾರುನ್ನೂರು ಶಾರ್ಜಾ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾಳೆಹೊನ್ನೂರು ಸಭಿಕರನ್ನು ಅಥಿತಿಗಳನ್ನು ಸ್ವಾಗತಿಸಿ ಸಭೆಗೆ ಬರ ಮಾಡಿಕೊಂಡರು. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ , ಗುರುವರ್ಯರು ಆದ ಬಹುಮಾನ್ಯ ಅಬ್ದುಲ್ ಸಲಾಂ ಉಸ್ತಾದರು ಮಾತನಾಡಿ ಪರಿಶುದ್ಧ ರಸೂಲ್ ಕರೀಂರವರ ಗುಣಗಾನ ಮಾಡಿ ಅವರ ಮೇಲಿನ ಪ್ರೀತಿಯನ್ನು ನಾವು ಯಾವ ರೀತಿಯಲ್ಲಿ ತೋರಿಸಬೇಕು , ಸಹಾಬಿ ವರ್ಯರು ಯಾವ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂಬ ವಿಷಯವನ್ನು ಹೇಳಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜನಾಬ್ ಸಫ್ ವಾನ್ ತಂಡದ ಬುರ್ದಾ ಹಾಗು ಹಯಾತುಲ್ ಇಸ್ಲಾಂ ದಫ್ ತಂಡ ಪರ್ಲಡ್ಕ ಇವರ ದಫ್ ಪ್ರದರ್ಶನ ಸಭಾ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಅಂತರಾಷ್ಟ್ರೀಯ ವಾಗ್ಮಿ ಬಹುಮಾನ್ಯ ಸಿಂಸಾರುಲ್ ಹಕ್ ಹುದವಿ ಉಸ್ತಾದರು ಮುಖ್ಯ ಪ್ರಭಾಷಣ ನಡೆಸಿದ್ದರು ನಬಿ ಸ ಅ ಸಲ್ಲಮ ತಂಗಳ್ ರವರ ಗುಣಗಾನ , ಅವರಲ್ಲಿ ಅಡಗಿದ ಸ್ವಬಾವ ಗುಣಗಳನ್ನು ವಿವರಿಸಿ ಮಾತನಾಡಿದ ಉಸ್ತಾದರು ಆ ಮಾಹಾನುಭಾವರ ಮೇಲಿನ ಮೌಲಿದ್ ಪಾರಾಯಣ , ಮಧ್ಹ್ ಆಲಾಪನೆ ಗಳನ್ನು ಮಾಡುವುದು ಪುಣ್ಯ ಕರ್ಮವಾಗಿದೆ ಎಂದು ಮನ ಮುಟ್ಟುವ ಶೈಲಿಯಲ್ಲಿ ಪ್ರಭಾಷಣ ಗೈದರು ,ಕೊನೆಯಲ್ಲಿ ಸುಲೈಮಾನ್ ಉಸ್ತಾದರು ಧನ್ಯವಾದ ಸಮರ್ಪಣೆ ಗೈದರು ಮುಹಮ್ಮದ್ ಅಝ್ಫರ್ ಕಿರಾತ್ ಪಠಿಸಿ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು
ಕೆ ಐ ಸಿ ಇದರ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ , ಶಂಸುಲ್ ಉಲಮಾ ತೋಡಾರ್ ಯುಎಇ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ , ನೂರುಲ್ ಹುದಾ ಯುಎಇ ಸಮಿತಿ ಅಧ್ಯಕ್ಷರಾದ ಷರೀಫ್ ಕಾವು , ಫೈಝಲ್ ಮುಹ್ಸಿನ್ , ಅಶ್ರಫ್ ನಾಟೆಕಲ್ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದು ಸಹಕರಿಸಿದ್ದರು. ಬದ್ರುದ್ದೀನ್ ಹೆಂತಾರ್ , ರಫೀಕ್ ಸುರತ್ಕಲ್ , ಸಿರಾಜ್ ಬಿ ಸಿ ರೋಡ್ ,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು ,
ಮೇಹೆಫಿಲ್ -ಇ ಮೀಲಾದ್ ಕಾರ್ಯಕ್ರಮದ ಚೇರ್ ಮ್ಯಾನ್ ಅಬ್ದುಲ್ ಸಲಾಂ ಬಪ್ಪಳಿಗೆ , ಕಾರ್ಯಕ್ರಮದ ಯಶಸ್ಸಿಗೆ ಪ್ರಧಾನ ಪಾತ್ರ ವಹಿಸಿದ್ದರು.
ನವಾಜ್ ಬಿ ಸಿ ರೋಡ್ , ಸಿರಾಜ್ ಬಿ ಸಿ ರೋಡ್, ಸಾಜಿದ್ ಬಜ್ಪೆ ಇಸ್ಮಾಯಿಲ್, ಮುಂಝಿರ್, ಅಝೀಝ್ ಸೊಂಪಾಡಿ , ನಾಸಿರ್ ಬಪ್ಪಳಿಗೆ ,ಜಾಬಿರ್ ಬಪ್ಪಳಿಗೆ , ಸುಹೈಲ್ ಚೊಕ್ಕಬೆಟ್ಟು ,ಶಬೀರ್ ಫರಂಗಿಪೇಟೆ ನಿಜಾಮ್ ತೋಡಾರ್ ಷರೀಫ್ ಕೊಡ್ನೀರ್ , ಅಝರ್ ಹಂಡೇಲ್ , ಆಸೀಫ್ ಮರೀಲ್ ,ಅಬ್ದುಲ್ ಲತೀಫ್ ಕೌಡಿಚ್ಚಾರ್ , ಸೇರಿದಂತೆ ದಾರುನ್ನೂರು ಅಧೀನ ಸಮಿತಿಗಳ ಹಲವು ಕಾರ್ಯಕರ್ತರು ಉಪಸ್ಥಿತರಿದ್ದು ಸಹಕರಿಸಿದರು.
ದಾರುನ್ನೂರು ಅಬುದಾಬಿ ಸಮಿತಿ ಅಧ್ಯಕ್ಷರಾದ ರವೂಫ್ ಹಾಜಿ ಕೈಕಂಬ ಅವರ ನೇತೃತ್ವದಲ್ಲಿ TASTEMANIA ಎಂಬ ಶೀರ್ಷಿಕೆಯಡಿ FOOD COMPUTATION ಕಾರ್ಯಕ್ರಮವನ್ನು ಏರ್ಪಡಿಸಿತ್ತು , ಅಲ್ಲದೆ TATLENTANIA ಎಂಬ ಶೀರ್ಷಿಕೆಯಡಿಯಲ್ಲಿ ಜೂನಿಯರ್ ಹಾಗು ಸೀನಿಯರ್ ವಿಭಾಗದ ಮಕ್ಕಳ ವಿವಿಧ ಆನ್ ಲೈನ್ ಸ್ಪರ್ಧಾ ಕಾರ್ಯ ಕ್ರಮವನ್ನು ಕೂಡ ಏರ್ಪಡಿಸಲಾಗಿತ್ತು.