ಬಂಟ್ವಾಳ : ಸೋಶಿಯಲ್ ಇಖ್ವಾ ಫೆಡರೇಷನ್,ಮಾಣಿ ಇದರ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ (ಸ. ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ “ಸ್ನೇಹಸಮ್ಮಿಲನ” ಕಾರ್ಯಕ್ರಮ ಮಾಣಿಯ ರಾಜ್ ಕಮಲ್ ಆಡಿಟೋರಿಯಂ ಸೂರಿಕುಮೇರು ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಶಿಯಲ್ ಇಖ್ವಾ ಫೆಡರೇಷನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸುಲ್ತಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ದುವಾ ಹಾಗೂ ಉದ್ಘಾಟನೆಯನ್ನು ಉಡುಪಿ ಶಿವಮೊಗ್ಗ ಹಾಸನ ಚಿಕ್ಕಮಗಳೂರು ಸಂಯುಕ್ತ ಖಾಝಿಗಳಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಇವರು ನಡೆಸಿಕೊಟ್ಟರು. ಸೋಶಿಯಲ್ ಇಖ್ವಾ ಫೆಡರೇಷನ್ ನ ಮಾಧ್ಯಮ ಕಾರ್ಯದರ್ಶಿ ಪಿ.ಜೆ.ಅಬ್ದುಲ್ ಅಝೀಝ್ ಗಡಿಯಾರ ಸ್ವಾಗತಿಸಿದರು. ಸೋಶಿಯಲ್ ಇಖ್ವಾ ಫೆಡರೇಷನ್ ನ ಜೊತೆ ಕಾರ್ಯದರ್ಶಿ ಬಾಶಿತ್ ಬುಡೋಳಿ ಸಂಘಟನೆಯ ಆಗು ಹೋಗುಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವಾನ್ವಿತ ಅತಿಥಿಗಳಾದ ಆಲ್ ಇಂಡಿಯಾ ಇಮಾಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಜಾಫರ್ ಸ್ವಾದಿಕ್ ಫೈಝಿ, ಪಬ್ಲಿಕ್ ಟಿವಿಯ ಹಿರಿಯ ಪತ್ರಕರ್ತರಾದ ಬದ್ರುದ್ದೀನ್ ಮಾಣಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್, ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.
ಮುಸ್ಲಿಮರು ತಮ್ಮ ನಡುವಿನ ಆದರ್ಶಗಳ ಭಿನ್ನತೆಗಳನ್ನು ಒಪ್ಪಿಕೊಂಡು ಒಗ್ಗಟ್ಟಾದಾಗ ಮಾತ್ರ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ.ಎಲ್ಲಾ ಸಂಘಟನೆಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ ನಮ್ಮ ಮುಂದಿರುವ ವಿವಿಧ ಸವಾಲುಗಳನ್ನು ಎದುರಿಸಬಹುದು.ಕೋಮುವಾದಿ ಶಕ್ತಿಗಳನ್ನು ಸೋಲಿಸುವುದರೊಂದಿಗೆ ಈ ನೆಲದ ಪಾರಂಪರಿಕ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದು ಪ್ರತಿ ಭಾರತೀಯನ ಕರ್ತವ್ಯ.ಆದ್ಧರಿಂದ ಮುಸ್ಲಿಮೇತರರೂ ನಮ್ಮೊಂದಿಗೆ ಸೌಹಾರ್ಧಯುತ ಸಮಾಜ ಕಟ್ಟಲು ಸಹಕರಿಸಬೇಕೆಂದು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ರಾಜ್ಯಾಧ್ಯಕ್ಷರಾದ ಎಸ್ ಬಿ ದಾರಿಮಿ ದಿಕ್ಸೂಚಿ ಭಾಷಣ ಮಾಡುತ್ತಾ ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೋಶಿಯಲ್ ಇಖ್ವಾ ಫೆಡರೇಷನ್ ನ ಗೌರವ ಸಲಹೆಗಾರರಾದ ಮೊಹಮ್ಮದ್ ರಫೀಕ್ ಹಾಜಿ ಸುಲ್ತಾನ್ ಹಾಗೂ ಉಮರ್ ರಾಜ್ ಕಮಲ್, ಕೊಡಾಜೆ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ರಾಜ್ ಕಮಲ್ ಹಾಗೂ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ, ಸೂರಿಕುಮೇರು ಜುಮಾ ಮಸೀದಿಯ ಅಧ್ಯಕ್ಷರಾದ ಮೂಸಾ ಕರೀಂ ಹಾಗೂ ಖತೀಬರಾದ ಇಸ್ಮಾಯಿಲ್ ಆಸಿಫ್ ಹನೀಫಿ, ಬಿಲಾಲ್ ಜುಮಾ ಮಸೀದಿ ಏನಾಜೆಯ ಖತೀಬರಾದ ಅಬ್ದುಲ್ ಮಜೀದ್ ದಾರಿಮಿ, ಗಡಿಯಾರ ಜುಮಾ ಮಸೀದಿಯ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆ, ಕೆಮ್ಮನ್ ಕಡೇಶ್ವಾಲಯ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಎಸ್. ಮೊಹಮ್ಮದ್, ನೀರಪಾದೆ ಜುಮಾ ಮಸೀದಿಯ ಅಧ್ಯಕ್ಷರಾದ ರಶೀದ್ ನೀರಪಾದೆ, ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯವ್ಯಾಪ್ತಿಯ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು. ಸೋಶಿಯಲ್ ಇಖ್ವಾ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೆಶ್ವಾಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಶೈಕ್ಷಣಿಕ ಕಾರ್ಯದರ್ಶಿ ಲತೀಫ್ ಇಂಜಿನಿಯರ್ ಧನ್ಯವಾದಗೈದರು.