ಕರಾವಳಿಪುತ್ತೂರು

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಸ್ಪರ್ಧೆಯ ಫಲಿತಾಂಶ ಘೋಷಣೆ

ಸವಣೂರು : ಎಸ್ಕೆ ಎಸ್ ಎಸ್ ಎಫ್ ಸವಣೂರು ಕ್ಲಸ್ಟರಿನ ಅಧೀನದಲ್ಲಿ ಕಾರ್ಯಚರಿಸುತ್ತಿರುವ ತ್ವಲಬಾ ವಿಂಗ್ ಸಮಿತಿಯು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಂತಹ ವಿವಿಧ ಸ್ಪರ್ಧೆಯ ಫಲಿತಾಂಶ ಘೋಷಣೆ ಸಮಸ್ತ ಸವಣೂರು ವಾಟ್ಸಪ್ ಗ್ರೂಪಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಸ್ಟರ್ ತ್ವಲಬಾ ಕಾರ್ಯದರ್ಶಿ ಹನೀಫ್ ಸವಣೂರು ರವರು ವಹಿಸಿದ್ದರು. ಚಾಪಲ್ಲ ದರ್ಸ್ ವಿದ್ಯಾರ್ಥಿ ಮನ್ಸೂರ್ ಖಿರಾಅತ್ ಪಠಿಸಿದರು. ಚಾಪಲ್ಲ ಮುದರ್ರಿಸ್ ಉಸ್ತಾದ್ ಅಶ್ರಫ್ ಬಾಖವಿ ದುಆ ನೆರವೇರಿಸಿದರು. ಶಫೀಕ್ ಸವಣೂರು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಜುನೈದ್ ಜಿಫ್ರಿ ತಂಙಲ್ ರವರು ನಿರ್ವಹಿಸಿದರು. ತ್ವಲಬಾವಿಂಗ್ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ರಾಫೀ ಮೂವಟ್ಟುಪುಝ ರವರು ಮುಖ್ಯ ಪ್ರಭಾಷಣ ಗೈದರು. ಎಸ್ಕೆ ಎಸ್ ಎಸ್ ಎಫ್ ಪುತ್ತೂರು ವಲಯ ಅಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಎಸ್ಕೆ ಎಸ್ ಎಸ್ ಎಫ್ ಸವಣೂರು ಶಾಖೆಯ ಅಧ್ಯಕ್ಷರಾದ ಜಲೀಲ್ ಫೈಝಿ, ತ್ವಲಬಾವಿಂಗ್ ದ. ಕ ಅಧ್ಯಕ್ಷರಾದ ಉವೈಸ್ ತೋಕೆ ರವರು ಆಶಂಶ ಭಾಷಣ ನಡೆಸಿದರು. ಪೊಲೀಸ್ ಅಧಿಕಾರಿ ಸಲೀಂ ವೀರಮಂಗಲ ಫಲಿತಾಂಶ ಘೋಷಿಸಿದರು. ಶೀರ್ಷಿಕೆ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನವನ್ನು ಹನಾನ್ ಮುಕ್ವೆ ದ್ವಿತೀಯ ಸ್ಥಾನವನ್ನು ಮುಹಾಸಿನ್ ಪಡೆದರು. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಯಾಸರ್ ಉಮರ್, ದ್ವಿತೀಯ ಸ್ಥಾನವನ್ನು ಮುಹಾಸಿನ ರವರು ಪಡೆದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಹಾಜಿ ಕಣಿಮಜಲು, PK ಅಬೂಬಕ್ಕರ್ ಹಾಜಿ ಕಾಯರ್ಗ, B.ಸುಲೈಮಾನ್ ಪರಣೆ, ಸುಲೈಮಾನ್ ವೀರಮಂಗಲ
ಅಬ್ದುಲ್ ಹಮೀದ್, ರಝಾಕ್ ಅಝ್ಹರಿ, ಅಶ್ರಫ್ ರಹ್ಮಾನಿ,
ಫಾರುಕ್ ವಿಎಂ, ರಿಯಾಝ್ ಫೈಝಿ ಪಟ್ಟೆ, ಝುಬೈರ್ ಬಿ.ಎಸ್, ಶರೀಫ್ ಅಝ್ಹರಿ, ಶರೀಫ್ ದಾರಿಮಿ, ಶಮೀರ್ ವೀರಮಂಗಳ, ರಾಝಿಕ್ ಸವಣೂರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು. ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು. ರಿಯಾಝ್ ಪರಣೆ ಕಾರ್ಯಕ್ರಮವನ್ನು ನಿರೂಪಿಸಿದರು ರಾಝೀ ಸರ್ವೆ ವಂದಿಸಿದರು.

Related Articles

Back to top button