ಹಟ್ಟಿ : ಅದಿರು ಪುಡಿಗೊಳಿಸುವಿಕೆ ನೂತನ ದಾಖಲೆ
ಹಟ್ಟಿಚಿನ್ನದಗಣಿ: ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ 2021 ರ ಆಗಸ್ಟ್ 26 ರಂದು ಒಂದೇ ದಿನದಲ್ಲಿ 2,430 ಮೆಟ್ರಿಕ್ ಟನ್ ಅದಿರನ್ನು ಪುಡಿಗೊಳಿಸುವ (ಮಿಲ್ಲಿಂಗ್) ಮೂಲಕ ತನ್ನದೇ ಎರಡನೇ ದಾಖಲೆಯನ್ನು ನೂತನವಾಗಿ ನಿರ್ಮಿಸಿದೆ.
ಈ ಹಿಂದೆ ಲೋಹ ವಿಭಾಗದಲ್ಲಿ 26 ಮೇ 2019ರಂದು 2,460 ಮೆಟ್ರಿಕ್ ಟನ್ ಅದಿರನ್ನು ಪುಡಿ ಮಾಡಿರುವುದು ಪ್ರಥಮ ದಾಖಲೆಯಾಗಿದೆ.
ಈ ಹಿಂದೆ ಲೋಹ ವಿಭಾಗದಲ್ಲಿ 26 ಮೇ 2019ರಂದು 2,460 ಮೆಟ್ರಿಕ್ ಟನ್ ಅದಿರನ್ನು ಪುಡಿ ಮಾಡಿರುವುದು ಪ್ರಥಮ ದಾಖಲೆಯಾಗಿದೆ.
ಸಾಮಾನ್ಯವಾಗಿ ದಿನಕ್ಕೆ ಎರಡು ಸಾವಿರ ಮೆಟ್ರಿಕ್ ಟನ್‌ವರೆಗೂ ಅದಿರು ಪುಡಿಗೊಳಿಸಲಾಗುತ್ತದೆ. ಇದೀಗ ಗರಿಷ್ಠಮಟ್ಟದಲ್ಲಿ ಅದಿರು ಪುಡಿಗೊಳಿಸಿರುವುದು ಎರಡನೇ ದಾಖಲೆಯಾಗಿ ಪರಿಣಮಿಸಿದೆ.
ಮೂರು ಪಾಳಿಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ಪಾಳಿಯ ಎಂಟು ಗಂಟೆಗಳ ಅವಧಿಯಲ್ಲಿ 880 ಮೆಟ್ರಿಕ್ ಟನ್ ಅದಿರು ಪುಡಿ ಮಾಡಿರುವುದು ಗಣಿ ಕಂಪನಿ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದಂತಾಗಿದೆ.
ದಾಖಲೆಗೆ ಕಾರಣವಾಗಿರುವ ಅಧಿಕಾರಿಗಳು, ಕಾರ್ಮಿಕರು ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಲೋಹ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ವಿಧಾತ್ರಿ, ವ್ಯವಸ್ಥಾಪಕ ಗುರುಬಸ್ಸಯ್ಯ ಸ್ವಾಮಿ, ಫೋರಮೆನ್ ಜಬೃದ್ದೀನ್ ಪಾಷಾ ಹಾಗೂ ಕಾರ್ಮಿಕರು ಹಾಜರಿದ್ದರು.
‘ಕೋವಿಡ್ ಮಹಾಮಾರಿ ಮಧ್ಯೆಯೂ ಚಿನ್ನ ಉತ್ಪಾದನೆಯನ್ನು ಹೆಚ್ಚಿಸಲು ಕಾರ್ಮಿಕರ ಪರಿಶ್ರಮ ಕಾರಣ. ಈಗ ಒಂದೇ ದಿನದಲ್ಲಿ 2,430 ಅದಿರು ಕ್ರಷಿಂಗ್ ಮಾಡಿದ್ದಾರೆ. ಇದರಿಂದ ಚಿನ್ನವು ಅಧಿಕವಾಗಿ ಸಿಗುತ್ತದೆ. ಇದೇ ರೀತಿ ಬಂಗಾರದ ಬೆಲೆಯು ಹೆಚ್ಚಾಗಿದೆ. ಇದರಿಂದ ಕಂಪೆನಿಗೆ ಅಧಿಕ ಲಾಭ ಸಿಗಲಿದೆ. ಎಲ್ಲವೂ ಮುಂದೆ ಸ್ಪಷ್ಟವಾಗಲಿದೆ’ ಎಂದು ಗಣಿ ಕಂಪೆನಿ ಅಧಿಕಾರಿಗಳು ತಿಳಿಸಿದರು.
ಲೋಹ ವಿಭಾಗದ ಉಪಪ್ರಧಾನ ಅಧಿಕಾರಿ, ಕಾರ್ಮಿಕರ ತಂಡದ ಶ್ರಮದ ಫಲವಾಗಿ ಪ್ರಯತ್ನ ಮೀರಿ ಕಾರ್ಯ ನಿರ್ವಹಿಸಿದ್ದರಿಂದ, ಒಂದೇ ಪಾಳಿಯಲ್ಲಿ 880 ಮೆಟ್ರಿಕ್ ಟನ್ ಮಿಲ್ಲಿಂಗ್ ಮಾಡಲಾಗಿದೆ. ಗಣಿ ಇತಿಹಾಸದಲ್ಲಿ ದಾಖಲೆಯಾಗಿದೆ.