ಮಂಗಳೂರು : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ದ.ಕ ಜಿಲ್ಲೆಯ ಸರ್ವ ವಿದ್ಯಾರ್ಥಿ ನಾಯಕರ ಸಭೆಯು ಜಮ್ಹಿತುಲ್ ಫಲಾಹ್ ಸಭಾಂಗಣದಲ್ಲಿ ನಡೆಸಲು ಸಿಧ್ದತೆ ನಡೆಸುತ್ತಿದ್ದಂತೆ ಪೋಲಿಸರಿಂದ ಆಡಳಿತ ಕಮಿಟಿಗೆ ಕರೆ ಮಾಡಿ ಸಭೆಗೆ ಅನುಮತಿ ನೀಡದಂತೆ ತಾಕೀತು ಮಾಡಲಾಯಿತು. ಇದರಿಂದಾಗಿ ವಿದ್ಯಾರ್ಥಿ ನಾಯಕರು ರಸ್ತೆಯಲ್ಲೇ ಸಭೆ ನಡೆಸಿ ಎನ್.ಇ.ಪಿ ವಿರುಧ್ದದ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಾಧಿಕ್ ಜಾರತ್ತಾರು, ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಖಂದಕ್, ಸರ್ವ ವಿದ್ಯಾರ್ಥಿ ಒಕ್ಕೂಟದ ಮುಖಂಡ ಬಾತಿಶ್ ಅಳಕೆಮಜಲು, ಎನ್.ಎಸ್.ಯು.ಐ ಜಿಲ್ಲಾ ಮುಖಂಡ ಪವನ್ , ಎಮ್.ಎಸ್.ಎಫ್ ಜಿಲ್ಲಾಧ್ಯಕ್ಷ ಮುಸ್ತಫಾ ಕಟ್ಟತ್ತಾರು ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.
❤️ Penelope want to meet you! Click Here: http://inx.lv/6Yc2?h=4272214972770237f32963ee45e10800- ❤️