ಪುತ್ತೂರು : ಪುತ್ತೂರು ಕಮ್ಯೂನಿಟಿ ಸೆಂಟರ್ ನ ಶೈಕ್ಷಣಿಕ ಅಭಿಯಾನದಲ್ಲಿ ಕೈ ಜೋಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ ಸೂರಿಲ್ಲ ದವರಿಗೆ ಆಸರೆ ತಂಡ ಸುಮಾರು 50 ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿತು. ಕಮ್ಯೂನಿಟಿ ಸೆಂಟರ್ ಅಧ್ಯಯನ ಮಾಡಿ, ಪರಿಶೀಲಿಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಶಿಕ್ಷಣ ಕ್ಕೆ ಆಸರೆ ಅಭಿಯಾನದ ಮೂಲಕ
ಕಾಲೇಜಿನಲ್ಲೇ ಫೀಸು ಬರಿಸಲಾಯಿತು. ಈಗಾಗಲೇ ಸುಮಾರು 20 ಲಕ್ಷ ರುಪಯಿ ವಿದ್ಯಾರ್ಥಿ ವೇತನದ ಮೂಲಕ ಕಮ್ಯೂನಿಟಿ ಸೆಂಟರ್ 200 ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದು, ಇದಕ್ಕೆ ಸಹಕರಿಸುವ ಉದ್ದೇಶದಿಂದ ಸೂರಿಲ್ಲದವರಿಗೊಂದು ಆಸರೆ ತಂಡವು ಈ ಬೃಹತ್ತ್ ಸಹಾಯವನ್ನು ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ನೀಡಿದೆ.
ಸೂರಿಲ್ಲದವರಿಗೊಂದು ಆಸರೆ ತಂಡ ಕಳೆದ ಹಲವಾರು ವರ್ಷದಿಂದ ವಾಟ್ಸಾಪ್ ಗ್ರೂಪ್ ರಚಿಸಿ ಬಡ – ಅಸಾಹಯಕ ಸಂಸಾರಕ್ಕೆ ಮನೆ ನಿರ್ಮಿಸಿ ಕೊಡುವುದು, ಮನೆ ರಿಪೇರಿ ಮಾಡಿ ಕೊಡುವುದನ್ನು ಮಾಡುತ್ತಿದೆ. ಈಗಾಗಲೇ 50 ಕ್ಕಿಂತ ಹೆಚ್ಚು ಮನೆಯನ್ನು ಪುನರ್ ನಿರ್ಮಿಸಿ ಕೊಟ್ಟು ಆಸರೆಯಾಗಿದೆ. ಪುತ್ತೂರು ಕಮ್ಯೂನಿಟಿ ಸೆಂಟರ್ ಈಗಾಗಲೇ 1500 ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಐನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಕ್ಯಾರಿಯರ್ ಕೌಂನ್ಸಿಲಿಂಗ್ ಮಾಡಿ ದೇಶದ ಭವಿಷ್ಯದ ತಲೆಮಾರಿಗೆ ಮಾರ್ಗದರ್ಶನ ಮಾಡುತ್ತಿದೆ. ಈ ಪ್ರಯತ್ನವನ್ನು ಶ್ಲಾಘಿಸಿದ ಸೂರಿಲ್ಲದವರಿಗೊಂದು ಆಸರೆ ತಂಡದ ಮುಖ್ಯಸ್ಥರಾದ ಮಹಮ್ಮದ್ ಕುಕ್ಕುವಳ್ಳಿಯವರು ಸಂಸ್ಥೆಯ ಈ ಮಹಾ ಅಭಿಯಾನದಲ್ಲಿ ಜೊತೆ ಸೇರಲು ಈ 50 ವಿದ್ಯಾರ್ಥಿಗಳಿಗೆ ನೆರವಾಗಿದ್ದೇವೆ ಎಂದರು.
ಶಿಕ್ಷಣಕ್ಕೊಂದು ಆಸರೆ ಯ ಮೂಲಕ ಒಂದುವರೆ ಲಕ್ಷ ರುಪಾಯಿಯನ್ನು ತಂಡವು ಕಮ್ಯೂನಿಟಿ ಸೆಂಟರಿಗೆ ನೀಡಿತು. ಅದನ್ನು ಸ್ವೀಕರಿಸಿ, ಆಯಾ ಶಾಲಾ -ಕಾಲೇಜಿನ ವಿದ್ಯಾರ್ಥಿಗಳ ಮಾಹಿತಿಯ ಜೊತೆ ನೇರವಾಗಿ ಶಾಲಾ -ಕಾಲೇಜಿನಲ್ಲೇ ಫೀಸು ಬರಿಸುವಂತೆ ವಿನಂತಿಸಲಾಯಿತು. ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳ ಮಾಹಿತಿ ನೀಡುತ್ತದೆ, ಆರ್ಥಿಕ ನೆರವನ್ನು ನೇರವಾಗಿ ಶಿಕ್ಷಣ ಸಂಸ್ಥೆಗೆ ನೀಡುವಂತೆ ಹೇಳುತ್ತದೆ. ಇಂದು ಸೂರಿಲ್ಲದವರಿಗೊಂದು ಆಸರೆ ತಂಡ ಸಿಕ್ಕಿದ ವಿದ್ಯಾರ್ಥಿಗಳ ದಾಖಲೆಯೊಂದಿಗೆ ಪಿಲೋಮಿನಾ ಕಾಲೇಜಿಗೆ ಮೊದಲ ಕಂತನ್ನು ನೀಡಿತು. ಸೂರಿಲ್ಲದವರಿಗೊಂದು ಆಸರೆ ತಂಡದ ಜಲೀಲ್ ಬೈತಡ್ಕ, ಕಮ್ಯೂನಿಟಿ ಸೆಂಟರ್ ನ ಇಮ್ತಿಯಾಝ್ ಪಾರ್ಲೆ ಸ್ಕಾಲರ್ಶಿಪ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.