ಕರ್ನಾಟಕಬೆಳಗಾವಿ

BIG NEWS: ನಾಲ್ಕೇ ದಿನಗಳಲ್ಲಿ ಎಲ್ಲವೂ ನಿರ್ಧಾರ; ನಿಗಮ ಮಂಡಳಿ ನನಗೆ ಬೇಡ; ಅಸಮಾಧಾನ ಹೊರ ಹಾಕಿದ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಶ್ರೀಮಂತ ಪಾಟೀಲ್, ಇನ್ನೂ ಸಾಕಷ್ಟು ಸಮಯವಿದೆ ನನಗೂ ಸಚಿವ ಸ್ಥಾನ ಕೊಡಬಹುದು ಎಂಬ ಭರವಸೆಗಳಿವೆ. ಆದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನನಗೆ ಬೇಡ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮಂತ ಪಾಟೀಲ್, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಸ್ವೀಕರಿಸಲ್ಲ. ಮೇಲಿನ ಸ್ಥಾನ ಕೊಟ್ಟರೆ ನಿಭಾಯಿಸುವೆ, ಆದರೆ ನಾನು ಕೆಳಗೆ ಬರಲು ಇಚ್ಛಿಸಲ್ಲ. ಹಾಗಾಗಿ ಸಚಿವ ಸ್ಥಾನ ನೀಡಿದರೆ ಉತ್ತಮ ಎಂದರು.

ಮರಾಠಾ ಸಮುದಾಯದವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಮುದಾಯದವರು ಬೇಸರ ವ್ಯಕ್ತಪಡಿಸುವುದು ಬೇಡ. ಇನ್ನೂ ನಾಲ್ಕು ದಿನಗಳಲ್ಲಿ ಎಲ್ಲವೂ ನಿರ್ಧಾರವಾಗುತ್ತೆ. ಜವಾಬ್ದಾರಿಗಳನ್ನು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಹಾಗಾಗಿ ಕಾದು ನೋಡೋಣ. ಪಕ್ಷ ಏನೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಆನಂದ್ ಸಿಂಗ್ ಖಾತೆ ವಿಚಾರವಾಗಿ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಖಾತೆಯೂ ದೊಡ್ಡದು, ಚಿಕ್ಕದು ಎಂದು ಇರುವುದಿಲ್ಲ. ಕೊಟ್ಟ ಖಾತೆಯನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

Related Articles

Back to top button