ರಾಷ್ಟ್ರೀಯ

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

“ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಸದ್ಯದ ಸ್ಥಿತಿಯನ್ನು ಪರಿಗಣಿಸಿ ವೀಸಾ ವಿತರಣೆಗೆ ವಿಶೇಷ ವ್ಯವಸ್ಥೆ ಮಾಡುವ ಸಂಬಂಧ ಸಚಿವಾಲಯು ಪರಿಶೀಲನೆ ಮಾಡುತ್ತಿದೆ. ಇ-ಎಮರ್ಜೆನ್ಸಿ ಎಕ್ಸ್‌-ಮಿಸ್ಕ್‌ ವೀಸಾ ಹೆಸರಿನ ಹೊಸ ರೀತಿಯ ಎಲೆಕ್ಟ್ರಾನಿಕ್ ವೀಸಾವನ್ನು ಭಾರತಕ್ಕೆ ಬರಲಿರುವ ಅಫ್ಘಾನಿಗಳಿಗೆ ವಿತರಿಸಲಾಗುವುದು” ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.

ಇದೇ ವೇಳೆ, ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ ಹಾಗು ಸಿಖ್ ಸಮುದಾಯದ ನೆರವಿಗೆ ಬರುವುದಾಗಿ ಭಾರತ ತಿಳಿಸಿದೆ.
“ಅಫ್ಘನ್ ಸಿಖ್ ಹಾಗೂ ಹಿಂದೂ ಸಮುದಾಯದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನ ಬಿಡಲು ಇಚ್ಛಿಸುವ ಮಂದಿಗೆ ಭಾರತಕ್ಕೆ ಬರಲು ಇಚ್ಛೆಯಿದ್ದಲ್ಲಿ ಅಗತ್ಯ ವ್ಯವಸ್ಥೆ ಮಾಡುತ್ತೇವೆ” ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

Related Articles

Back to top button