BIGG BREAKING NEWS : ಕೆಲವೇ ಕ್ಷಣಗಳಲ್ಲಿ ಸಚಿವ ಆನಂದ್ ಸಿಂಗ್ ಮಹತ್ವದ ಸುದ್ದಿಗೋಷ್ಠಿ : ರಾಜೀನಾಮೆ ನಿರ್ಧಾರ ಪ್ರಕಟ.?
ಬೆಂಗಳೂರು : ಪರಿಸರ ಮತ್ತು ಜೀವವಿಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆಯಿಂದಾಗಿ ಅಸಮಾಧಾನಗೊಂಡಿರುವಂತ ಸಚಿವ ಆನಂದ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Anand Sigh VS CM Basavaraj Bommai ) ವಿರುದ್ಧ ಸಿಡಿದೆದ್ದಿದ್ದಾರೆ. ಹೊಸಪೇಟೆಯಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿರುವಂತ ಆನಂದ್ ಸಿಂಗ್, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸಿಎಂ ಸಂಪರ್ಕಕ್ಕೆ ಸಿಗುತ್ತಿಲ್ಲ. ಇಂತಹ ಸಚಿವ ಆನಂದ್ ಸಿಂಗ್ ಅವರು, ಕೆಲವೇ ಕ್ಷಣಗಳಲ್ಲಿ ಮಹತ್ವದ ಸುದ್ಧಿಗೋಷ್ಠಿ ನಡೆಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನಿರ್ಧಾರವನ್ನು ಘೋಷಿಸುತ್ತಾರಾ ಎಂಬ ತೀವ್ರ ಕುತೂಹಲವನ್ನು ಹುಟ್ಟಿಸಿದೆ.
ತಮಗೆ ಹಂಚಿಕೆಯಾದಂತ ಖಾತೆ ಹಂಚಿಕೆಯಿಂದಾಗಿ ಅಸಮಾಧನಗೊಂಡಿರುವಂತ ಸಚಿವ ಆನಂದ್ ಸಿಂಗ್ ಅವರು, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಲಿರುವಂತ ಅವರು, ಆನಂತ್ರ ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದು ಬಹುತೇಕ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.
ಮಡಿಕೇರಿಯಲ್ಲಿ ಒಟ್ಟಿಗೆ SSLC ಪಾಸ್ ಮಾಡಿದ ತಾಯಿ-ಮಗ.!
ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆಯ ಅಸಮಾಧಾನವನ್ನು ಸ್ಪೋಟಿಸಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಕೂಡ ಮಾಡಲಿದ್ದಾರೆ. ಈಗಾಗಲೇ ಯಡಿಯೂರಪ್ಪ ಅವರಿಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯ ನಂತ್ರ, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಲಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯಲ್ಲಿ ಪೂಜೆ, ಪುರಸ್ಕಾರದಲ್ಲಿ ತೊಡಗಿರುವಂತ ಅವರು ಆನಂದ್ ಸಿಂಗ್ ಅವರನ್ನು, ರಾಜು ಗೌಡ ಅವರಿಗೆ ತಿಳಿಸಿ, ಕರೆದುಕೊಂಡು ಬರುವಂತೆ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಜೆ 4 ಗಂಟೆಗೆ ಸಿಎಂ ಅವರನ್ನು ಭೇಟಿಯಾಗಲಿದ್ದು, ಆನಂತ್ರ ರಾಜೀನಾಮೆ ನಿರ್ಧಾರ ಪ್ರಕಟಪಡಿಸಲಿದ್ದಾರೆ ಆನಂದ್ ಸಿಂಗ್ ಎನ್ನಲಾಗಿದೆ.
ಇದಲ್ಲದೇ ಕೆಲವೇ ಕ್ಷಣಗಲ್ಲಿ ಪೂಜೆ ಮುಗಿದ ನಂತ್ರ ಮಹತ್ವದ ಸುದ್ದಿಗೋಷ್ಠಿಯನ್ನು ಸಚಿವ ಆನಂದ್ ಸಿಂಗ್ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಗೋಷ್ಠಿಯಲ್ಲಿ ತಮ್ಮ ಸಚಿವ ಸ್ಥಾನ ನೀಡಿಕೆಯ ಅಸಮಾಧಾನವನ್ನು ಹೊರ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ.. ಸಚಿವ ಸ್ಥಾನದ ಅಸಮಾಧಾನದಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನಿರ್ಧಾರವನ್ನು ಕೂಡ ಪ್ರಕಟಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆ ಬಗ್ಗೆ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿದು ಬರಲಿದೆ.