ಕರ್ನಾಟಕ

BIGG NEWS : ಇಂದು ಸಚಿವ ಸ್ಥಾನಕ್ಕೆ ‘ಆನಂದ್ ಸಿಂಗ್’ ರಾಜೀನಾಮೆ : ‘ಬೊಮ್ಮಾಯಿ ಸಂಪುಟ’ದಲ್ಲಿ ಮೊದಲ ವಿಕೆಟ್‌ ಪತನ.?!

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೀಡಿರುವಂತ ಸಚಿವ ಸ್ಥಾನದಿಂದ ಅತೃಪ್ತಿಯಾಗಿರುವಂತ ಸಚಿವ ಆನಂದ್ ಸಿಂಗ್ ( Minister Anand Sigh ) ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿಯೇ ಅವರ ಬಳ್ಳಾರಿಯ ಕಚೇರಿಯ ಮುಂದಿನ ಶಾಸಕರ ಕಚೇರಿಯ ಬೋರ್ಡ್ ಕೂಡ ತೆಗೆದು ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಆನಂದ್ ಸಿಂಗ್ ಅವರಿಗೆ ಸಿಎಂ ಬೊಮ್ಮಾಯಿ ( CM Bommai ) ಸಚಿವ ಸಂಪುಟದಲ್ಲಿ ಪರಿಸರ ಮತ್ತು ಜೀವವಿಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆಯನ್ನು ಹಂಚಿಕೆ ಮಾಡಲಾಗಿತ್ತು. ಆದ್ರೇ.. ಅವರು ನಿರೀಕ್ಷೆ ಮಾಡಿದ್ದಂತ ಖಾತೆಯೇ ಬೇರೆಯಾಗಿದ್ದು, ಸಿಎಂ ನೀಡಿದ್ದೇ ಬೇರೆ ಖಾತೆಯಾಗಿದ್ದರಿಂದಾಗಿ ಬೇಸರವಾಗಿದೆ ಎಂಬುದಾಗಿ ಸ್ವತಹ ಸಚಿವ ಆನಂದ್ ಸಿಂಗ್ ಅವರೇ ತಿಳಿಸಿದ್ದರು.ಸಚಿವ ಖಾತೆಯ ಅತೃಪ್ತಿಯಲ್ಲಿರುವಂತ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ನಿರ್ಧಾರಕ್ಕೆ ಬರಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಆನಂದ್ ಸಿಂಗ್ ಅವರಿಗೆ ಈಗ ನೀಡಿರುವಂತ ಖಾತೆಯನ್ನು ಬದಲಿಸಿ ಕೊಡದೇ ಇದ್ದಲ್ಲಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಿನ್ನೆಯಷ್ಟೇ ಆನಂದ್ ಸಿಂಗ್ ಜೊತೆಗೆ ಮಾತನಾಡಿದ್ದೇನೆ. ಎಲ್ಲವನ್ನು ಅವರು ತಿಳಿಸಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆ ಹರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಆದ್ರೇ.. ಸಚಿವ ಆನಂದ್ ಸಿಂಗ್ ಅವರ ಬಳ್ಳಾರಿಯ ಶಾಸಕರ ಕಚೇರಿಯ ಮುಂದೆ ಇದ್ದಂತ ಬೋರ್ಡ್ ಅನ್ನು ನಿನ್ನೆ ತೆರವುಗೊಳಿಸಲಾಗಿದೆ. ಹೀಗಾಗಿ ಖಾತೆ ಬದಲಿಸಿ ಕೊಡದೇ ಇದ್ದಲೇ, ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎನ್ನುವಂತ ಕುತೂಹಲಕ್ಕೂ ಕಾರಣವಾಗಿದೆ. ಆ ಬಗ್ಗೆ ಕಾದು ನೋಡಬೇಕಿದೆ.

Related Articles

Back to top button