Uncategorized

Corona Updates : ದೇಶದಲ್ಲಿ ಒಂದೇ ದಿನ 38,353 ಕೊರೋನಾ ಪ್ರಕರಣ ದಾಖಲು, 497 ಜನ ಸಾವು

ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ – ಇಳಿಕೆಯಾಗುತ್ತಿದೆ. ಇದೀಗ ಬುಧವಾರ 38,353 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ ಮಂಗಳವಾರ 24ಗಂಟೆಗಳಲ್ಲಿ 28,204 ಸೋಂಕುಗಳಿಂದ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶತೋರಿಸಿದೆ.

ಇನ್ನು ಕೊರೋನಾದಿಂದಾಗಿ ದೇಶದಲ್ಲಿ 497 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ಪ್ರಕರಣಗಳೊಂದಿಗೆ, ಭಾರತದ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 32,036,511 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 386,351ಕ್ಕೆ ಇಳಿದಿದೆ, ಇದು 140ದಿನಗಳಲ್ಲಿ ಅತ್ಯಂತ ಕಡಿಮೆ.

ಸಾಂಕ್ರಾಮಿಕ ರೋಗದ ಆರಂಭದಿಂದ ಸೋಂಕಿಗೆ ಒಳಗಾದ ಜನರಲ್ಲಿ, ಕೋವಿಡ್-19 ರಿಂದ 31,220,981 ರೋಗಿಗಳು ಈಗಾಗಲೇ ಚೇತರಿಸಿಕೊಂಡಿದ್ದಾರೆ

Related Articles

Back to top button