ಕರಾವಳಿಮಂಗಳೂರು

SKSSF ಕೈಕಂಬ ವಲಯ ವಿಧ್ಯಾ ಸಮುಚ್ಚಯ 29ಕ್ಕೆ ಸಮಸ್ತ ಅಧ್ಯಕ್ಷರಾದ ಜಿಫ್ರಿ ತಂಙಳ್ ರಿಂದ ಚಾಲನೆ

ಕೈಕಂಬ : SKSSF ಗುರುಪುರ ಕೈಕಂಬ ವಲಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ

👉🏻•”ಸಂಶುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು”

👉🏻•”ಅಲ್-ಬಿರ್ರ್ ಇಸ್ಲಾಮಿಕ್ ಸ್ಕೂಲ್”

👉🏻•”ಅಲ್-ಮದರಸತುಲ್ ಅಸ್ರಾರುದ್ದೀನ್.” ಹಾಗು,

👉🏻•”ಮಿತಬೈಲ್ ಉಸ್ತಾದ್ ಹಿಫ್ಲ್ ಕಾಲೇಜು.”

ಎಂಬಿತ್ಯಾದಿ ವಿದ್ಯಾ ಸಮನ್ವಯ ಪಾಲನೆಯ ಕಟ್ಟಡ ಅಕ್ಟೋಬರ್ 29ರಂದು ಬೆಳಿಗ್ಗೆ 9 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷರಾದ ಬಹು! ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ, SKSSF ಜಿಲ್ಲಾ ಅಧ್ಯಕ್ಷರಾದ ಬಹು! ಸೆಯ್ಯದ್ ಅಮೀರ್ ತಂಙಳ್,ಕೈಕಂಬ ವಲಯ ಅಧ್ಯಕ್ಷರಾದ ಬಹು! ಜಮಾಲುದ್ದೀನ್ ದಾರಿಮಿ, ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಗುರುಪುರ ರೇಂಜ್ ಇದರ ನಾಯಕರು ಸೇರಿದಂತೆ ಸಾಮಾಜಿಕ ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಕೈಕಂಬ ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button