ಕರಾವಳಿಬಂಟ್ವಾಳ

SKSSF ವಿಖಾಯ ವತಿಯಿಂದ ಸ್ವಾತಂತ್ರೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ : ಎಸ್ಕೆಎಸ್ಎಸ್ಎಫ್ ವಿಖಾಯ , ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ಹಾಗೂ ಎಸ್ಕೆಎಸ್ಎಸ್ಎಫ್ ಕೆಮ್ಮಾನ್ – ನಚ್ಚಬೆಟ್ಟು ಶಾಖೆಯ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾನುಪಲ್ಕೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಆನಂದ ನಾಯ್ಕ್ , ಶಿಕ್ಷಕರಾದ ಬಾಬು ಪೂಜಾರಿ , ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ಅಧ್ಯಕ್ಷರಾದ ಸತ್ತಾರ್ ಪಟಿಲ ಕಡೇಶ್ವಾಲ್ಯ, ಪ್ರಧಾನ ಕಾರ್ಯದರ್ಶಿ ಅಹ್ಮದ್ ನಿಝಾರ್ ಮುಸ್ಲಿಯಾರ್, ವಿಖಾಯ ಮಾಣಿ ಕ್ಲಸ್ಟರ್ ಕನ್ವೀನರ್ ಸನಾವುಲ್ಲಾ ಗಡಿಯಾರ್, ಎಸ್ಕೆಎಸ್ಎಸ್ಎಫ್ ಕೆಮ್ಮಾನ್-ನಚ್ಚಬೆಟ್ಟು ಶಾಖೆಯ ಅಧ್ಯಕ್ಷರಾದ ರಫೀಕ್ ಕೆಮ್ಮಾನ್, ಮುಹ್ಯಿಯುದ್ದೀನ್ ಜುಮಾ ಮಸ್ಜಿದ್ ಗಡಿಯಾರ್ ಇಲ್ಲಿನ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆ, ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಅಧ್ಯಕ್ಷರಾದ ಮೂಸಾ ಕರೀಂ,ಮಸ್ಜಿದುನ್ನೂರ್ ಜುಮಾ ಮಸೀದಿ ನೀರಪಾದೆ ಇದರ ಅಧ್ಯಕ್ಷರಾದ ರಶೀದ್ ಕೊರ್ಯ, ಎಸ್ಕೆಎಸ್ಎಸ್ಎಫ್ ಜಿಲ್ಲಾ ಸಮಿತಿ ಸದಸ್ಯರಾದ ಪಿ.ಜೆ. ಅಬ್ದುಲ್ ಅಝೀಝ್ ಗಡಿಯಾರ್, ಎಸ್ಕೆಎಸ್ಎಸ್ಎಫ್ ವಿಟ್ಲ ವಲಯ ವರ್ಕಿಂಗ್ ಕಾರ್ಯದರ್ಶಿ ಇಸಾಕ್ ಕೌಸರಿ ಹಾಗೂ ಎಸ್ಕೆಎಸ್ಎಸ್ಎಫ್ ಪ್ರಮುಖರಾದ ಮಜೀದ್ ಸೂರಿಕುಮೇರು,ನವಾಝ್ ಕೊಡಾಜೆ,ಇಸಾಕ್ ಕೆಮ್ಮಾನ್ ಮುಸ್ತಫಾ ಕೆಮ್ಮಾನ್,ಹನೀಫ್ ಗಡಿಯಾರ್,ಉಸ್ಮಾನ್ ನೆಡ್ಯೇಲು ಕೊಡಾಜೆ ಹಾಗೂ ವಿಖಾಯ ಮಾಣಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಖೆಗಳ ಕಾರ್ಯಕರ್ತರು ಹಾಜರಿದ್ದರು.

Related Articles

Back to top button