ಬೆಂಗಳೂರು

ರಾಜ್ಯಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ದ.ಕ. ಜಿಲ್ಲೆಯ ಟ್ವೆಕಾಂಡೋ ಪಟುಗಳಿಗೆ ಚಿನ್ನ-ಬೆಳ್ಳಿ ಸಹಿತ 13 ಪದಕಗಳು

ಬೆಂಗಳೂರು : ಜಿಲ್ಲಾ ಟ್ವೆಕಾಂಡೋ ಎಸೋಸಿಯೇಶನ್ ವತಿಯಿಂದ ಇತ್ತಿಚೆಗೆ ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 38ನೇ ರಾಜ್ಯ ಟೆಕ್ವಾಂಡೋ ಚಾಂಪಿಯನ್ ಶಿಪ್-2021 ಕ್ರೀಡಾಕೂಟದಲ್ಲಿ ಮಿನಿ ಸಬ್ ಜ್ಯೂನಿಯರ್, ಸಬ್ ಜ್ಯೂನಿಯರ್, ಕೆಡಟ್, ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಸಹಿತ ಒಟ್ಟು 13 ಪದಕಗಳನ್ನು ಜಯಿಸಿದ್ದಾರೆ.

ಮಿನಿ ಜೂನಿಯರ್ ವಿಭಾಗದಲ್ಲಿ ಬಂಟ್ವಾಳ-ಕೆಳಗಿನಪೇಟೆ ನಿವಾಸಿ ಶಾಝ್ಮಾ ಫಾತಿಮಾ, ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಮುಹಮ್ಮದ್ ಶಯಾನ್, ಮೆಲ್ಕಾರ್-ಬೋಗೋಡಿ ನಿವಾಸಿ ಮುಹಮ್ಮದ್ ಮುಸ್ತಫಾ ಹಾಗೂ ಕೃಷ್ಣಾಪುರ-ಕಾಟಿಪಳ್ಳ ನಿವಾಸಿ ಅಬೂಬಕ್ಕರ್ ಮುಹನ್ನದ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಮುಹಮ್ಮದ್ ಮುಸ್ತಫಾ ಹಾಗೂ ಸಬ್ ಜೂನಿಯರ್ ವಿಭಾಗದ 25 ಕೆ ಜಿ ವಯೋಮಿತಿಯಲ್ಲಿ ಭಾಗವಹಿಸಿದ್ದ ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಮುಹಮ್ಮದ್ ಶಾಕೀಬ್ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮಿನಿ ಸಬ್ ಜೂನಿಯರ್ ವಿಭಾಗದಲ್ಲಿ ಬಿ ಸಿ ರೋಡು ನಿವಾಸಿ ಸ್ಕಂದ ಶೆಣೈ, ಕೃಷ್ಣಾಪುರ ನಿವಾಸಿಗಳಾದ ರೊವಿನಾ ಪಿಂಟೊ, ಮುಹಮ್ಮದ್ ಮಿಶಾಲ್, ಕುಳಾಯಿ ನಿವಾಸಿ ಮುಹಮ್ಮದ್ ಶಿಮಾಕ್ ಅಲಿ,

ಕೆಡೆಟ್ ಹುಡುಗರ ವಿಭಾಗದ 49 ಕೆ ಜಿ ವಯೊಮಿತಿಯಲ್ಲಿ ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಮುಹಮ್ಮದ್ ನಿಹಾಲ್ ನಝೀರ್, 45ಕೆ.ಜಿ ವಯೊಮಿತಿಯಲ್ಲಿ ಕಲ್ಲಡ್ಕ ನಿವಾಸಿ ಮುಹಮ್ಮದ್ ಶಾಮಿಲ್, ಮಹಿಳೆಯರ ಜೂನಿಯರ್ ವಿಭಾಗದಲ್ಲಿ 46 ಕೆ ಜಿ ವಯೋಮಿತಿಯಲ್ಲಿ ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಫಾತಿಮಾ ಮುಸ್ಕಾನ ಇವರು ಕಂಚಿನ ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ತರಬೇತಿ ಕೇಂದ್ರಗಳಾಗಿರುವ ಪಾಣೆಮಂಗಳೂರಿನ ಫಿಟ್ಟೆಸ್ ಮಲ್ಟಿ ಜಿಂ ಮತ್ತು ಮಾರ್ಷಲ್ ಆಟ್ರ್ಸ್ ಸೆಂಟರ್ ಹಾಗೂ ಎಕ್ಸ್ಟ್ರೀಂ ಫೈಟ್ ಕ್ಲಬ್ ಸುರತ್ಕಲ್ ಕೇಂದ್ರದಲ್ಲಿ  ಟ್ವೆಕಾಂಡೋ  ತರಬೇತಿಯನ್ನು ಪಡೆದಿದ್ದು, ಜಿಲ್ಲಾ ಮುಖ್ಯ ಟ್ವೆಕಾಂಡೋ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹಾಯಕ ತರಬೇತುದಾರ ಶಹಬನ್ ಟಿ ಕೆ ಡಿ ಕುಳಾಯಿ ಅವರು ತರಬೇತಿ ನೀಡಿ ಸಜ್ಜುಗೊಳಿಸಿದ್ದರು.

Related Articles

Back to top button