ಕರಾವಳಿಬಂಟ್ವಾಳ

ನೇತ್ರಾವತಿ ನದಿಯಲ್ಲಿ ಗೋ ರಕ್ಷಣಾ ಪ್ರಮುಖ್  ರಾಜೇಶ್ ಸುವರ್ಣ ಶವಪತ್ತೆ

ಪಾಣೆಮಂಗಳೂರು: ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳದ ಪಾಣೆಮಂಗಳೂರು ಹಳೆ ಸೇತುವೆ ಬಳಿ ನಡೆದಿದೆ. ಇದು ಆತ್ಮಹತ್ಯೆಯೋ, ಅಪಘಾತವೋ ಎಂಬುದು ದೃಢಪಟ್ಟಿಲ್ಲ.

ರಾಜೇಶ್ ಪೂಜಾರಿ ಅವರು ಸಜೀಪ ವಿಶ್ವ ಹಿಂದೂ ಪರಿಷತ್ ಮುಖಂಡ, ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ಆಗಿದ್ದರು ಎಂದು ತಿಳಿದುಬಂದಿದೆ. ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ.

ಗೂಡಿನಬಳಿಯ ಮುಳುಗುತಜ್ಞರಾದ ಮುಹಮ್ಮದ್( ಮಮ್ಮು), ಇಕ್ಬಾಲ್ (ಬಾಬಿ), ಹಾರಿಸ್, ಇಬ್ರಾಹೀಂ ಎಂ.ಕೆ. ಅವರು ನದಿಯಲ್ಲಿ ಶೋಧ ಮತ್ತು ಮೃತದೇಹ ಮೇಲಕ್ಕೆತ್ತಲು ಸಹಕರಿಸಿದರು. ರಾಜೇಶ್ ಅವರು ಕಳೆದ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಸೇತುವೆಯಲ್ಲಿ ಅಪಘಾತಕ್ಕೀಡಾಗಿ ಅವರು ನದಿಗೆಸೆಯಲ್ಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೋಲಿಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.

Related Articles

Back to top button